ಬೇಲೂರ ಗ್ರಾಮದಲ್ಲಿ ಮತಯಾಚನೆ

ಇಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಅವರು ಬಸವಕಲ್ಯಾಣದ ಬೇಲೂರ ಗ್ರಾಮದಲ್ಲಿ ಮತಯಾಚನೆ ನಡೆಸಿದರು. ಸೇರಿದ ಜನರನ್ನು ಉದ್ದೇಶಿಸಿ ಮಾತನಾಡಿದ ಖೂಬಾ ಅವರು, ಶ್ರೀಗುರುಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡುವುದೆಂದರೆ ಅವರ ಆದರ್ಶಗಳನ್ನು ಸ್ವೀಕರಿಸಿದ್ದೇವೆ ಎನ್ನುವುದನ್ನು ಮರೆಯಬಾರದು. ಬಸವಕಲ್ಯಾಣದಲ್ಲಿಯೇ ಹುಟ್ಟಿಬೆಳೆದ ಮನೆಮಗನಾಗಿ ನಾನು ಕಾರ್ಯ ಮಾಡಿಕೊಡಲು ಎಂದಿಗೂ ಸಿದ್ಧನಿದ್ದೇನೆ. ಅದಕ್ಕಾಗಿ ಕೇವಲ ನಿಮ್ಮ ಆಶೀರ್ವಾದ ಬೇಕಿದೆ ಎಂದರು.

ಗ್ರಾಮದ ಪ್ರಮುಖರಾದ ಅಶೋಕ್ ವಕಾರೆ, ಸೂರ್ಯಕಾಂತ್ ಚಿಲ್ಲಾಬಟ್ಟೆ, ಸುಧೀರ್ ಕಡಾದಿ, ಪ್ರಕಾಶ್ ಮಂಡೋಳೆ, ರವಿ ಗುಂಗೆ, ಪ್ರಶಾಂತ್ ಅಳ್ಳೆ, ಜಗನ್ನಾಥ್ ಚಿಲ್ಲಾಬಟ್ಟೆ, ರವಿ ಚಣ್ಣನಕೆರೆ ಇನ್ನಿತರರು ಹಾಜರಿದ್ದರು.