ಗೋಕುಳ ಗ್ರಾಮದಲ್ಲಿ ಮತಯಾಚನೆ

ಇಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಅವರು ಬಸವಕಲ್ಯಾಣದ ಗೋಕುಳ ಗ್ರಾಮದಲ್ಲಿ ಮತಯಾಚನೆ ನಡೆಸಿದರು. ಸೇರಿದ ಜನರನ್ನು ಉದ್ದೇಶಿಸಿ ಮಾತನಾಡಿದ ಖೂಬಾ ಅವರು, ವಿಶ್ವದ ನಾಯಕನಾಗಿ ಭಾರತ ಹೊರಹೊಮ್ಮುವ ದಿನಗಳು ದೂರವಿಲ್ಲ. ಈ ಸಮಯದಲ್ಲಿ ರಾಜ್ಯದ ನಾಯಕರನ್ನೂ, ಶಾಸಕರನ್ನೂ, ಸರಿಯಾಗಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಬಿಜೆಪಿಗೆ ನಿಮ್ಮ ಆಶೀರ್ವಾದವಿರಲಿ ಎಂದರು.

ಗ್ರಾಮದ ಪ್ರಮುಖರಾದ ಬಾಲಾಜಿ ಪಾಟೀಲ್, ಸುಭಾಷ್ ರೆಡ್ಡಿ, ಪ್ರಹ್ಲಾದ್ ರೆಡ್ಡಿ, ದತ್ತಾತ್ರೇಯ ಪಂಚಾಳ್, ಶಿವಕುಮಾರ್ ಪರ್ತಾಪುರೆ, ಗೌರಿಶಂಕರ್ ಮೂಳ್ಕೆರೆ, ಬಾಹು ದೇಸಾಯಿ, ಇನ್ನಿತರರು ಹಾಜರಿದ್ದರು.