ಹಾಲಳ್ಳಿಯಲ್ಲಿ ಮತಯಾಚನೆ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಹಾಲಳ್ಳಿಯಲ್ಲಿ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಅವರು ಮತಯಾಚನೆ ಮಾಡಿದರು. ವಾದ್ಯಘೋಷ ಹಾಗೂ ಸಿಡಿಮದ್ದು ಸಿಡಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು, ಬಿಜೆಪಿ ಜಯಘೋಷ ಕೂಗಿದರು. ಸೇರಿದ ಜನರನ್ನು ಕುರಿತು ಮಾತನಾಡಿದ ಖೂಬಾ ಅವರು, ದಿನವಿಡೀ ದುಡಿಯುವ ವರ್ಗದ ಜನರು ನಿಟ್ಟುಸಿರು ಬಿಡುವ ಸಲುವಾಗಿ ಬಿಜೆಪಿಗೆ ಅಧಿಕಾರ ನೀಡಬೇಕಿದೆ. ರೈತರ ಸಾಲಮನ್ನಾದಂತಹ ಯೋಜನೆಗಳು ಬಿಜೆಪಿ ಪ್ರಣಾಳಿಕೆಯಲ್ಲಿದ್ದು, ಅದನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈಡೇರಿಸಲಿದ್ದೇವೆ. ಹಾಗಾಗಿ ಜನರು ಬಿಜೆಪಿಗೆ ಬೆಂಬಲ ನೀಡಬೇಕಿದೆ ಎಂದರು.