ಹೂಲಸೂರಿನ ಗಾಂಧೀಚೌಕದ ಹತ್ತಿರ ನಡೆದ ಕಾರ್ಯಕ್ರಮ

ಮೇ.10, ಹೂಲಸೂರ : ಕ್ಷೇತ್ರದ ಜನರ ಆಶಯವನ್ನು ಅರಿತು, ಅವರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಕೆಲಸ ನಿರ್ವಹಿಸಲು ಸದಾ ಸಿದ್ಧ ಎಂದು ಮಲ್ಲಿಕಾರ್ಜುನ ಸಿದ್ಧರಾಮಪ್ಪ ಖೂಬಾ ಹೇಳಿದರು.

ಹೂಲಸೂರಿನ ಗಾಂಧೀಚೌಕದ ಹತ್ತಿರ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಸವಕಲ್ಯಾಣದ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರು, ನರೇಂದ್ರ ಮೋದಿಯವರ ಹಾಗೂ ಬಿಜೆಪಿಯ ಅಲೆ ದೇಶದಾದ್ಯಂತ ಬೀಸುತ್ತಿದೆ. ಅದು ಭಾರತದಲ್ಲಿ ಕಾಂಗ್ರೆಸ್ ನ ನಿಶಾನೆಯನ್ನೇ ಧೂಳೀಪಟ ಮಾಡಲಿದೆ. ಎಂದಿಲ್ಲದ ಅಭಿವೃದ್ಧಿಯ ಕ್ರಾಂತಿ ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಆಗುವಂತೆ ಮಾಡಲು, ಜನರು ಆಶೀರ್ವಾದ ಮಾಡಬೇಕಿದೆ ಎಂದರು.

ರೈತರ ಕ್ಷೇಮವೇ ಕ್ಷೇತ್ರದ ಕ್ಷೇಮ.

ಮಾನ್ಯ ಮೋದಿಯವರು ಹಾಗೂ ಯಡಿಯೂರಪ್ಪನವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ರೈತರು ಹಾಗೂ ಮಹಿಳೆಯರಿಗೆ ಬಿಜೆಪಿಯ ಪ್ರಣಾಳಿಕೆಯಲ್ಲಿ ಹಲವು ಯೋಜನೆಗಳನ್ನೂ ಘೋಷಸಲಾಗಿದ್ದು, ಅಧಿಕಾರಕ್ಕೆ ಬಂದ ದಿನಗಳಲ್ಲಿ ಅದನ್ನು ಪೂರೈಸಲು ಸಿದ್ಧರಿದ್ದೇವೆ. ಅಷ್ಟಲ್ಲದೇ ಅಪಾರ ಯುವವೃಂದ, ಪ್ರಚಂಡ ಇಚ್ಛಾಶಕ್ತಿಯೊಂದಿಗೆ ದೇಶಕ್ಕಾಗಿ ದುಡಿಯಲು ಸಜ್ಜಾಗಿದ್ದಾರೆ. ಇಂತಹಾ ಕಾರ್ಯಕರ್ತರ ಜೊತೆ ಕಾರ್ಯಕರ್ತನಾಗಿ ದುಡಿಯಲು ನಾನು ಬಿಜೆಪಿಯ ಅಭ್ಯರ್ಥಿಯಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಶಿವಪುತ್ರ ಗೌರ್, ಕಾಶಪ್ಪ ಬೀರಗೆ, ವಿಶ್ವನಾಥ್ ಕಾಡಾದಿ, ಚಂದ್ರಕಾಂತ್ ದೇಟ್ನೆ, ಸುಧೀರ್ ಕಾಡಾದಿ, ಲತಾ ಹರ್ಕುಡೆ, ಅನಿಲ್ ಭೂಸಾರೆ, ಸೂರ್ಯಕಾಂತ್ ಚಿಲ್ಲಾಬಟ್ಟೆ ಇನ್ನಿತರರು ಹಾಜರಿದ್ದರು.