ಇಂದು ವಾರ್ಡ್ ನಂ.4 ರಲ್ಲಿ ಮತಯಾಚನೆ

ಬಸವಕಲ್ಯಾಣದ ಬಿಜೆಪಿ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಅವರು ಇಂದು ವಾರ್ಡ್ ನಂ.4 ರಲ್ಲಿ ಮತಯಾಚನೆ ಮಾಡಿದರು. ಸೇರಿದ ಜನರನ್ನು ಕುರಿತು ಮಾತನಾಡಿದ ಖೂಬಾ ಅವರು, ಎಲ್ಲಾ ಸಮುದಾಯಗಳ ಹಿತ ಕಾಯಲು ಬಿಜೆಪಿ ಪಣತೊಟ್ಟಿದೆ. ರೈತರು ಹಾಗೂ ಮಹಿಳೆಯರಿಗೆ ವಿಶೇಷವಾಗಿ ಯೋಜನೆಗಳನ್ನು ಮಾಡಿರುವುದು ಬಿಜೆಪಿ ಸರ್ಕಾರ. ಹಾಗಾಗಿ ಬಿಜೆಪಿಗೆ ಜನರು ಆಶೀರ್ವಾದ ಮಾಡಿದಲ್ಲಿ ಜನರ ಆಶೋತ್ತರಗಳು ಈಡೇರಲು ಸಾಧ್ಯವಿದೆ ಎಂದರು.